Thursday 29 March 2012

ಸಾಗರದಾಚೆ

 ಸಾಗರದಾಚೆಯ ವನದಲಿ ಅರಳಿಹ
ಹೂವಿನ ತೆರದಲಿ  ನೀನಿರುವೆ 

ಮುದುಡಿದ ಮನದಲಿ 

ಹೂವನು ಮುಡಿಯಲು                       
ಕಾತರದಿಂದಲಿ ನಾನಿರುವೆ ..


ತೆರೆಗಳ ತೆರ ಬರುತಿಹ ಆಸೆಗಳ 
ಕಡಿವಾಣಕೆ ಮನ ಮೌನ 
ಸಾಗರದಲೆಗಳ ದಾಟಿಸಿ ನಡೆದರೆ 
ಬರುವುದುಹೊಸ ಋತು ಗಾನ                                                  

ಎಲ್ಲೋ ಅಡಗಿಹ ಕನಸು ಕಲ್ಪನೆಯ

 ಪಥವದು ನೆನಪಿನ ಹಾದಿ 
ಜಟಿಲಸಮಸ್ಯೆಯು  ಜೀವನವೆಂಬ 
ಸಾಗರ ಈಜುವ ಹಾದಿ  


                -ಮಧುಸೂದನ. ಭಟ್.